ಆರ್‍ಟಿಇ ಅಡಿ ಎಲ್‍ಕೆಜಿ ಯುಕೆಜಿ ಪ್ರವೇಶಕ್ಕಿಲ್ಲ ತಡೆ

ಮುಂದಿನ ಶೈಕ್ಷಣಿಕ ವರ್ಷದಿಂದ ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ (ಆರ್‍ಟಿಇ) ಪೂರ್ವ ಪ್ರಾಥಮಿಕ ಶಾಲಾ (ಎಲ್‍ಕೆಜಿ, ಯುಕೆಜಿ) ವಿದ್ಯಾರ್ಥಿಗಳ ಪ್ರವೇಶಕ್ಕೆ ನೀಡಿದ್ದ ತಡೆಯನ್ನು ಹೈಕೋರ್ಟ್ ...
ಹೈಕೋರ್ಟ್
ಹೈಕೋರ್ಟ್

ಬೆಂಗಳೂರು : ಮುಂದಿನ ಶೈಕ್ಷಣಿಕ ವರ್ಷದಿಂದ ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ (ಆರ್‍ಟಿಇ) ಪೂರ್ವ ಪ್ರಾಥಮಿಕ ಶಾಲಾ (ಎಲ್‍ಕೆಜಿ, ಯುಕೆಜಿ) ವಿದ್ಯಾರ್ಥಿಗಳ ಪ್ರವೇಶಕ್ಕೆ ನೀಡಿದ್ದ ತಡೆಯನ್ನು ಹೈಕೋರ್ಟ್ ತೆರವುಗೊಳಿಸಿದೆ. ಎಲ್‍ಕೆಜಿ ಮತ್ತು ಯುಕೆಜಿಗಳ ಪ್ರವೇಶಕ್ಕೆ ನೀಡಿರುವ ತಡೆಯನ್ನು ಮುಂದುವರಿಸಿದಲ್ಲಿ ಒಂದನೇ ತರಗತಿ ಪ್ರವೇಶಕ್ಕೆ ತೊಂದರೆಯಾಗಲಿದೆ. ಅಲ್ಲದೆ, ಈ ಕಾಯಿದೆಯಡಿ ಶಾಲೆಗೆ ಬರುವ ಬಹುತೇಕ ಎಲ್ಲ ಮಕ್ಕಳು ಬಡತನದ ರೇಖೆಗಿಂತ ಕೆಳಗಿರುತ್ತಾರೆ.

ಅಂಥವರ ಪ್ರವೇಶ ತಡೆಯುವುದಕ್ಕೆ ಸಾಧ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ. ಎಲ್‍ಕೆಜಿ ಮತ್ತು ಯುಕೆಜಿ ವಿದ್ಯಾರ್ಥಿಗಳು ಆರ್‍ಟಿಐ ವ್ಯಾಪ್ತಿಗೆ ಸೇರುವುದಿಲ್ಲ. ಆದರೆ, ರಾಜ್ಯ ಸರ್ಕಾರ ನಿಯಮಬಾಹಿರವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಎಲ್‍ಕೆಜಿ ಮತ್ತು ಯುಕೆಜಿಗೆ ಪ್ರವೇಶ ನೀಡುವಂತೆ ಒತ್ತಡ ಹೇರುತ್ತಿದೆ ಎಂದು ಆರೋಪಿಸಿ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಆಂಗ್ಲ ಮಾಧ್ಯಮ ಶಾಲೆಗಳ ಆಡಳಿತ ಮಂಡಳಿ (ಕ್ಯಾಮ್ಸ್) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಎ.ಎಸ್. ಬೋಪಣ್ಣ ಅವರಿದ್ದ ನ್ಯಾಯಪೀಠ ತಡೆಯನ್ನು ತೆರವು ಗೊಳಿಸಿದೆ.

ಅರ್ಜಿ ವಿಚಾರಣೆ ನಡೆಸಿದ್ದ ರಜಾ ಕಾಲದ ನ್ಯಾಯಪೀಠ, ಎಲ್‍ಕೆಜಿ ಮತ್ತು ಯುಕೆಜಿಗೆ ಪ್ರವೇಶ ಮಾಡಿಕೊಳ್ಳದಂತೆ ಮಧ್ಯಂತರ ತಡೆ ನೀಡಿತ್ತು. ಈ ತಡೆಯನ್ನು ತೆರವುಗೊಳಿಸುವಂತೆ ಕೋರಿ ಮಧ್ಯಂತರ ಅರ್ಜಿ ಸಲ್ಲಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com